Google will start manufacturing Pixel mobiles in India | ಭಾರತದಲ್ಲಿ ಪಿಕ್ಸೆಲ್ ಫೋನ್ ಉತ್ಪಾದನೆಗೆ ಗೂಗಲ್ ತಯಾರಿ

Google Pixel

Google to manufacture pixel smartphones in India – ಮುಂದಿನ ತ್ರೈಮಾಸಿಕ ವಷ೯ದಲ್ಲಿ ಗೂಗಲ್ ತನ್ನ ಪಿಕ್ಸೆಲ್ Google Pixel smartphones ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ತಯಾರಿಸಲು ಪ್ರಾರಂಭಿಸಲು ತನ್ನ ಪೂರೈಕೆದಾರರಿಗೆ ತಿಳಿಸಿದೆ, ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಮೇರಿಕದ ಸರ್ಚ್ ಇಂಜಿನ್ ದೈತ್ಯ Google ಸಂಕಲ್ಪ ಮಾಡಿದೆ ಎಂದು Nikkei ವರದಿ ಮಾಡಿದೆ.
ಮುಂಬರುವ ತಿಂಗಳಲ್ಲಿ ತನ್ನ ಹೈ-ಎಂಡ್ ಪಿಕ್ಸೆಲ್ 8 ಪ್ರೊ Google Pixel 8 Pro ಮೊಬೈಲ್‌ ಉತ್ಪಾದನೆಗೆ ಭಾರತದಲ್ಲಿ ಗೂಗಲ್ ಸಿದ್ಧಪಡಿಸುತ್ತದೆ, ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಫೋನ್‌ಗಳನ್ನು ಮಾರುಕಟ್ಟೆಗೆ ಲಭ್ಯವಾಗುವ ನಿರಿಕ್ಷೆಯಿದೆ. ಇದರ ನಂತರ ಪಿಕ್ಸೆಲ್ 8 ಉತ್ಪಾದನೆಯನ್ನು ಈ ವರ್ಷದ ಮಧ್ಯಭಾಗದಲ್ಲಿ ಪ್ರಾರಂಭಿಸಲಾಗುವುದು.
ಪ್ರಾರಂಭದಲ್ಲಿ ಗೂಗಲ್‌ನ ಇಂಡಿಯಾ Google India ತನ್ನ ಪಿಕ್ಸೆಲ್ ಫೋನ್‌ಗಳ Pixel mobile ಉತ್ಪಾದನೆಯು ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಲಿದೆ, ಇದು ಈಗಾಗಲೇ ವಿಯೆಟ್ನಾಂನಲ್ಲಿ ತನ್ನ ಫೋನ್‌ಗಳನ್ನು ತಯಾರಿಸುತ್ತಿರುವ ಪೂರೈಕೆದಾರರನ್ನು ಹೊಂದಿದೆ. ಈ ಹಿಂದೆ, ಗೂಗಲ್‌ನ ತನ್ನ ಹೆಚ್ಚಿನ ಪಿಕ್ಸೆಲ್ ಫೋನ್‌ಗಳನ್ನು ಚೀನಾದಲ್ಲಿ ಉತ್ಪಾದಿಸುತಿತ್ತು.
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯು 2023ನೇ ಸಾಲಿನಲ್ಲಿ 1% ರಷ್ಟು ಬೆಳವಣಿಗೆ ಕಂಡಿದ್ದು 146 ಮಿಲಿಯನ್ ಮೊಬೈಲ್‌ ಫೋನ್‌ಗಳು ಮಾರಾಟವಾಗಿವೆ, ವಿಶ್ವದ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾದ ಚೀನಾ ಕಳೆದ ವರ್ಷ ಶೇಕಡಾ 5% ಕುಸಿತವನ್ನು ಕಂಡಿದೆ ಎಂದು ಸಂಶೋಧನಾ ಸಂಸ್ಥೆ IDC ಯ ತನ್ನ ವರದಿಯಲ್ಲಿ ಹೇಳಿದೆ.

Google Pixel phones
Google to make Pixel phones in India

ಮೇಕ್ ಇನ್ ಇಂಡಿಯಾ Make in India ಹಾಗೂ ಸ್ಥಳೀಯವಾಗಿ ಗೂಗಲ್‌ ಪಿಕ್ಸಲ್ Google Pixel ಮೋಬೈಲ್‌ಗಳ ಬೇಡಿಕೆಯನ್ನು ಪೂರೈಸಲು ಗೂಗಲ್‌ Google ಉತ್ಪಾದನೆಯನ್ನು ಇಲ್ಲಿ ವಿಸ್ತರಿಸುವ ನಿಟ್ಟಿನಲ್ಲಿ ಇದು ಆರಂಭಿಕ ಹೆಜ್ಜೆಯಾಗಿದೆ. ಗೂಗಲ್ ಹೊರತಾಗಿ, ಅಪಲ್‌ Appļe, ಸ್ಯಾಂಮ್‌ಸಂಗ್‌ Samsung ಮತ್ತು ಫಾಕ್ಸ್‌ಕಾನ್ Foxconn ಸೇರಿದಂತೆ ಇತರ ಫೋನ್ ತಯಾರಕರು ಸಹ ಭಾರತದಲ್ಲಿ ಮೊಬೈಲ್‌ಗಳನ್ನು ತಯಾರಿಸಲು ಪ್ರಾರಂಭಿಸಿದ್ದಾರೆ.
ತೈವಾನ್ ಮೂಲದ ಫಾಕ್ಸ್‌ಕಾನ್ Foxconn, ವಿಶ್ವದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ತಯಾರಕ ಕಂಪನಿಯಾಗಿದ್ದು, ಚೀನಾದಿಂದ ದೂರ ಸರಿದು ಭಾರತದಲ್ಲಿ ಉತ್ಪಾದನಾ ಸೌಲಭ್ಯಗಳಲ್ಲಿ ಹೂಡಿಕೆ ಮಾಡುವ ಮೂಲಕ ತನ್ನ ಅಸ್ತಿತ್ವವನ್ನು ವೇಗವಾಗಿ ವಿಸ್ತರಿಸಿಕೊಳ್ಳುತ್ತಿದೆ. ಫಾಕ್ಸ್‌ಕಾನ್ ಈಗಾಗಲೇ ತಮಿಳುನಾಡಿನಲ್ಲಿ ತನ್ನ ಐಫೋನ್ ಫ್ಯಾಕ್ಟರಿಯನ್ನು ಹೊಂದಿದೆ, ಇದು ಸುಮಾರರು 40,000 ಜನರಿಗೆ ಉದ್ಯೋಗ ನೀಡಿದೆ. ಭವಿಷ್ಯದಲ್ಲಿ ಉತ್ಪಾದನೆಯ ವಿಷಯದಲ್ಲಿ ಭಾರತವು ಪ್ರಮುಖ ದೇಶವಾಗಲಿದೆ ಎಂದು ಫಾಕ್ಸ್‌ಕಾನ್ ಅಧ್ಯಕ್ಷ ಮತ್ತು ಸಿಇಒ ಯಂಗ್ ಲಿಯು ಈ ಹಿಂದೆ ಹೇಳಿದ್ದರು.
ಗೂಗಲ್ ಕಂಪನಿಯು ಕಳೆದ ವರ್ಷ ತನ್ನ ಮೊದಲ ಮೇಡ್ ಇನ್ ಇಂಡಿಯಾ ಪಿಕ್ಸೆಲ್ ಫೋನ್‌ಗಳು 2024ರ ತ್ರೈಮಾಸಿಕ ವಷ೯ ಲಭ್ಯವಿರುತ್ತದೆ ಎಂದು ಘೋಷಿಸಿತು, ಒಟ್ಟಾರೆ ಸ್ಮಾರ್ಟ್‌ಫೋನ್ ತಯಾರಿಕಾ ಉದ್ಯಮವು ನಿಧಾನವಾಗಿ ದೇಶದಲ್ಲಿ ಬೆಳೆಯುತ್ತಿರುವ ಭಾರತೀಯ ಮಾರುಕಟ್ಟೆಯನ್ನು ಟ್ಯಾಪ್ ಮಾಡುವಲ್ಲಿ ಆಪಲ್ ಮತ್ತು ಸ್ಯಾಮ್‌ಸಂಗ್ ಮುಂಚೂಣಿಯಲ್ಲಿವೆ.

One thought on “Google will start manufacturing Pixel mobiles in India | ಭಾರತದಲ್ಲಿ ಪಿಕ್ಸೆಲ್ ಫೋನ್ ಉತ್ಪಾದನೆಗೆ ಗೂಗಲ್ ತಯಾರಿ

  1. Its like you read my mind! You appear to know so much about this, like you wrote the book in it or something. I think that you can do with a few pics to drive the message home a little bit, but other than that, this is fantastic blog. A great read. I’ll certainly be back.

Leave a Reply

Your email address will not be published. Required fields are marked *