ಇತ್ತಿಚಿಗೆ ಸ್ಮಾರ್ಟ್ ವಾಚ್ ಒಂದು ಟ್ರೆಂಡ್ ಆಗಿದೆ, ಫಿಟ್‌ನೆಸ್ ಪ್ರಿಯರು ನೀವಾಗಿದ್ದರೆ, ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೀರಿ ಎಂದಾದರೆ ಸ್ಮಾರ್ಟ್ ವಾಚ್‌ಗಳು ನಿಮ್ಮ ಪ್ರಥಮ ಆಯ್ಕೆಯಾಗಿರುತ್ತದೆ. ನಿಮ್ಮ ಹೃದಯ ಬಡಿತ, ರಕ್ತದ ಒತ್ತಡ, ಆಮ್ಲಜನಕದ ಮಾನಿಟರ್, ವಾಕಿಂಗ್, ಬೈಕಿಂಗ್, ಜಿಮ್, ಯೋಗ, ಕ್ರೀಡೆ ಸೇರಿದಂತೆ ಇನ್ನಿತರ ಆರೋಗ್ಯದ ಮಾಹಿತಿಯನ್ನು ನಿಮ್ಮ ತಿಳಿಸುತ್ತದೆ, ಹೀಗಾಗಿ ಬಹುತೇಕರು ಸ್ಮಾಟ್ವಾಚ್‌ಗಳಿಗೆ ಮಾರುಹೊಗಿದ್ದಾರೆ. ಆಪಲ್ Apple ಹಾಗೂ ಸ್ಯಾಮ್‌ಸಂಗ್ Samsung ಸ್ಮಾರ್ಟ್ ರಿಂಗ್-Apple Ring – Samsung Galaxy Ring ರೂಪದಲ್ಲಿ ಧರಿಸಬಹುದಾದ Smart Wearable Ring ಉಂಗುರವನ್ನು ಮುಂಬರುವ ದಿನಗಳಲ್ಲಿ ಬಿಡುಗಡೆ ಮಾಡುವುದರಲ್ಲಿ ಪೈಪೋಟಿಗೆ ಬಿದ್ದಿದ್ದಾರೆ.
ಕಳೆದ ತಿಂಗಳು ಜನವರಿಯಲ್ಲಿ ನಡೆದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್24 Samsung Galaxy S24 ಸಿರಿಸ್ ಬಿಡುಗಡೆ ಸಮಾರಂಭದಲ್ಲಿ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ Samsung Electronics ಅಧಿಕೃತವಾಗಿ ಸ್ಮಾರ್ಟ್ ರಿಂಗ್ ರೂಪದಲ್ಲಿ ಧರಿಸಬಹುದಾದ ಸಾಧನವಾದ ‘ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್ Samsung Galaxy Ring’ ಅನ್ನು ಮುಂಬರುವ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಅಂದಿನಿಂದ, ಗ್ಯಾಲಕ್ಸಿ ರಿಂಗ್‌ನ Samsung Galaxy Ring ಅಧಿಕೃತ ಪರಿಚಯ ಮತ್ತು ಅದು ಯಾವಾಗ ಬಿಡುಗಡೆಯಾಗುತ್ತದೆ ಎಂಬುದರ ಕುರಿತು ಸಾಕಷ್ಟು ಊಹಾಪೋಹಗಳಿವೆ. ಕೆಲವು ವರದಿಗಳ ಪ್ರಕಾರ ಗ್ಯಾಲಕ್ಸಿ ರಿಂಗ್ಅನ್ನು ಮುಂದಿನ Samsung Galaxy Unpacked Event 2024 ಸ್ಯಾಮ್‌ಸಂಗ್ ಅನ್‌ಪ್ಯಾಕ್ ಈವೆಂಟ್‌ನಲ್ಲಿ Smart Wearable Ring ಸ್ಮಾರ್ಟ್ ರಿಂಗ್ ರೂಪದಲ್ಲಿ ಧರಿಸಬಹುದಾದ ಉಂಗುರವನ್ನು ಘೋಷಿಸಲಾಗುವುದು ಎಂದು ಹೇಳಲಾಗುತ್ತಿದೆ. ಇದು ಜುಲೈ ದ್ವಿತೀಯಾರ್ಧದಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಇಲ್ಲಿ Galaxy Z Fold6 ಮತ್ತು Galaxy Z Flip6 ಜೊತೆಗೆ Galaxy Ring ಗ್ಯಾಲಕ್ಸಿ ರಿಂಗ್ ಅಧಿಕೃತವಾಗಿ ಘೋಷಣೆಯಾಗುವ ನೀರೀಕ್ಷೆಗಳಿವೆ.
ಆಪಲ್ ಸಹ ವಿಷನ್ ಪ್ರೊ Apple Vision Pro ಬಿಡುಗಡೆಯ ನಂತರ ಹೊಸ ಉತ್ಪನ್ನ ಬಿಡುಗಡೆಗೆ ಸಜ್ಜಾಗುತ್ತಿದೆ. ಬೆರಳಿಗೆ ಧರಿಸಬಹುದಾದ Apple Ring – iRing ಆಪಲ್ ಸ್ಮಾರ್ಟ್ ರಿಂಗ್ ಸಂಬಂಧಿತ ಕಳೆದ ವರ್ಷದ ನವೆಂಬರ್‌ನಲ್ಲಿ ಪೇಟೆಂಟ್‌ಗಳನ್ನು ಒಂದರ ನಂತರ ಒಂದರಂತೆ ನೋಂದಾಯಿಸುವ ಮೂಲಕ Apple Ring – iRing ಆಪಲ್ ಸ್ಮಾರ್ಟ್ ರಿಂಗ್‌ನ ಅಭಿವೃದ್ಧಿಯನ್ನು ವೇಗಗೊಳಿಸುತ್ತಿದೆ ಮತ್ತು ಬಿಡುಗಡೆ ದಿನಾಂಕವನ್ನು ನಿಗದಿಮಾಡಲು ಸಜ್ಜಾಗುತ್ತಿದೆ ಎಂದು ಕೊರಿಯ ಮೂಲದ Electronic Times ವರದಿ ಮಾಡಿದೆ.
Features of Apple and Samsung Smart Ring | ಆಪಲ್ ಮತ್ತು ಸ್ಯಾಮ್‌ಸಂಗ್ ಸ್ಮಾರ್ಟ್ ರಿಂಗ್‌ನ ವೈಶಿಷ್ಟ್ಯಗಳು.
ಆಪಲ್ ಸ್ಮಾರ್ಟ್ ರಿಂಗ್ Apple Ring – iRing ಹೊಸ ಧರಿಸಬಹುದಾದ ರಚನೆಯ ಉಂಗುರವಾಗಿದ್ದು ಇದು ಎನ್.ಎಫ್.ಸಿ. NFC ನಿಯಂತ್ರಕ, ಹೃದಯ ಬಡಿತ ಮಾಪನ ಹಾಗೆ ಇತ್ತಿಚೆಗೆ ಬಿಡುಗಡೆಯಾದ ಆಪಲ್ ವಿಷನ್ ಪ್ರೊ Apple Vision Pro ಸೇರಿದಂತೆ ಇತರ ಆಪಲ್ ಉತ್ಪನ್ನಗಳನ್ನು ನಿಯಂತ್ರಿಸುವ ಇತ್ಯಾದಿಗಳನ್ನು ಅಯ್ಕೆಗಳನ್ನು ಹೊಂದಿರುತ್ತದೆ. ಮತ್ತು ಇದರಿಂದ ಸಂಪರ್ಕರಹಿತ ಪಾವತಿಗಳನ್ನು Contactless Payment ಸಹ ಮಾಡಬಹುದು. ಇದು ಸ್ಮಾರ್ಟ್ ವಾಚ್‌ಗಿಂತಲೂ ದೀರ್ಘಕಾಲ ಧರಿಸಲು ಸುಲಭವಾದ ಮತ್ತು ಆರಾಮದಾಯಕ ರಚನೆಯನ್ನು ಹೊಂದಿದ್ದು, ನಿಖರವಾದ ಬಯೋಮೆಟ್ರಿಕ್ ಮಾಹಿತಿಯನ್ನು ಸಂಗ್ರಹಿಸಬಲ್ಲ ವಿಶಿಷ್ಟವಾದ ಆರೋಗ್ಯ ಸಾಧನವಾಗಿಯೂ ಗಮನ ಸೆಳೆಯುತ್ತಿದೆ.
ಸ್ಯಾಮ್‌ಸಂಗ್ ಸ್ಮಾರ್ಟ್ ರಿಂಗ್ Samsung Galaxy Ring ಸಹ ರಕ್ತದ ಹರಿವನ್ನು Blood flow ಅಳೆಯುವ ಸಾಮರ್ಥ್ಯದ ಜೊತೆಗೆ, ECG ಮಾನಿಟರಿಂಗ್, ಸ್ಲೀಪ್ ಟ್ರ್ಯಾಕಿಂಗ್ ಮತ್ತು ಇತರ ಸಾಧನಗಳನ್ನು ನಿಯಂತ್ರಿಸಲು ಮತ್ತು Contactless Payment ವೈರ್‌ಲೆಸ್ ಪಾವತಿಗಳು ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ನಿಯಂತ್ರಿಸುವ ಇತ್ಯಾದಿಗಳನ್ನು ಅಯ್ಕೆಗಳನ್ನು ಹೊಂದಿರುವುದರ ಜೊತೆಗೆ ಮೊಬೈಲೊಂದಿಗೆ ಸಂಯೋಜಿಸಿ ಕರೆ, ಸಂಗೀತ ಹಾಗೂ ಸಂದೇಶಗಳನ್ನು ನಿಯಂತ್ರಿಸಬಹುದು ಎಂದು ನಿರೀಕ್ಷಿಸಲಾಗಿದೆ.
저는 흥미로운 블로그를 찾던 중 이 사이트에 들어왔습니다. 훌륭한 블로그입니다. 이 블로그가 도움이 되었고 더 많이 배울 수 있을 것 같습니다.
Thanks for the great sharing. Your article is a testament to your hard work and experience in this field. Great. I love reading it.
좋은 사이트입니다! 정말 보기 편하고 데이터가 잘 쓰여 있어서 좋습니다. 새 게시물이 올라올 때마다 알림을 받을 수 있는 방법이 궁금합니다. RSS 피드를 구독했는데 효과가 있을 듯합니다! 좋은 하루 보내세요!
훌륭한 공유에 감사드립니다. 귀하의 기사는 이 분야에서 귀하의 노고와 경험을 증명했습니다. 훌륭합니다. 읽는 것을 좋아합니다.